SAUNDATTI BRAKING NEWS *ರಾಮಾಪೂರಸೈಟ್ ಆಕಾಲಿಕ ಮಳೆಯಿಂದ ಮನೆ ಕುಸಿದು ಮಹಿಳೆ ಸ್ಥಿತಿ ಗಂಭೀರ*
ಸವದತ್ತಿ : ರಾಮಾಪೂರಸೈಟದ 22 ನೇ ವಾರ್ಡ್ ವ್ಯಾಪ್ತಿಯ ಅಕಾಲಿಕ ಮಳೆಗೆ ಮಂಗಳವಾರ ಮಧ್ಯರಾತ್ರಿ 11-45 ಕ್ಕೆ ಮನೆ ಗೋಡೆ ಕುಸಿದಿರುವ ಘಟನೆ ನಡೆದಿದೆ.
ಪಟ್ಟಣದ ಸವದತ್ತಿ ಕಳೆದ ಎರಡು ದಿನಗಳಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ
ಮನೆಯಲ್ಲಿದ್ದ ಯಲ್ಲವ್ವ ನಾಗಪ್ಪ ಯಮನೂರ,( 60 ) ಗಾಯಗೊಂಡಿದ್ದು.ಯಲ್ಲವ್ವರನ್ನು ಸವದತ್ತಿ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.
ಘಟನಾ ಸ್ಥಳಕ್ಕೆ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಅವರು ಭೇಟಿ ನೀಡಿ ಸರ್ಕಾರದಿಂದ ಹಾನಿಗೊಳಗಾದ ಮನೆತನಕ್ಕೆ ಶೀಘ್ರ ಪರಿಹಾರ ನೀಡುವುದಾಗಿ ಹೇಳಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ,ಕಿರಿಯ ಅಭಿಯಂತರು ಶಂಕರ ದಂಡಿನ, ಶಿವಾಜಿ ಕುದರಿ,ಕಂದಾಯ ನಿರೀಕ್ಷರು ಎಸ್,ಎಮ್, ಮುದಗಲ್,ಗ್ರಾಮ ಆಡಳಿತಅಧಿಕಾರಿ
ರಾಜೇಶ್ವರಿ ಹಡಪದ, ಪ್ರಸಾದ ಅಂಬಿಗೇರ,ಪ್ರವೀಣ ಮುನವಳ್ಳಿ ಪ್ರವೀಣ ಪಟ್ಟಣಶೆಟ್ಟಿ,ಪುರಸಭೆ ಸದಸ್ಯ ದ್ಯಾಮನಾ ಸುತಗಟ್ಟಿ,ಬಿ.ಎನ್.ಪ್ರಭುನವರ, ಭಾಗವಹಿಸಿದ್ದರು.